ಫೋಟೊ ಗ್ಯಾಲರಿ

21-05-21 02:16 pm ಫೋಟೊ

ಚಿಪ್ಕೋ ಚಳವಳಿಯ ನೇತಾರ ಸುಂದರ್ ಲಾಲ್ ಬಹುಗುಣ

ಚಿಪ್ಕೋ ಚಳವಳಿಯ ನೇತಾರ, ದೇಶ ಕಂಡ ಖ್ಯಾತ ಪರಿಸರ ಹೋರಾಟಗಾರ ಪದ್ಮಶ್ರೀ ಪುರಸ್ಕೃತ ಸುಂದರ್ ಲಾಲ್ ಬಹುಗುಣ(93) ಕೊರೊನಾ ಸೋಂಕಿಗೆ ತುತ್ತಾಗಿ ಕೊನೆಯುಸಿರೆಳೆದಿದ್ದಾರೆ. ಅವರನ್ನು ರಿಷಿಕೇಶದಲ್ಲಿರುವ ಏಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ನ್ಯುಮೋನಿಯಾ ಮತ್ತು ಮಧುಮೇಹದ ಜೊತೆಗೆ ಕೊರೊನಾ ಸೋಂಕು ತಗುಲಿದ್ದುದರಿಂದ ಅವರ ದೇಹಸ್ಥಿತಿ ಬಿಗಡಾಯಿಸಿತ್ತು.