ಫೋಟೊ ಗ್ಯಾಲರಿ

15-09-20 01:17 pm ಫೋಟೊ

ವಿಶ್ವ ಕಂಡ ಮಹಾನ್ ಮೇಧಾವಿ ಸರ್.ಎಂ. ವಿಶ್ವೇಶ್ವರಯ್ಯ

ವಿಶ್ವ ಕಂಡ ಮಹಾನ್ ಮೇಧಾವಿ, ಅಮರ ವಾಸ್ತುಶಿಲ್ಪಿ ಸರ್.ಎಂ. ವಿಶ್ವೇಶ್ವರಯ್ಯ ಅವರು ಹುಟ್ಟಿದ ದಿನ ಇಂದು. 1860ರ ಸೆಪ್ಟಂಬರ್ 15 ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ ಹುಟ್ಟಿದ ವಿಶ್ವೇಶ್ವರಯ್ಯನವರು ಬ್ರಿಟಿಷರ ಆಡಳಿತದಲ್ಲಿ ಬ್ರಿಟಿಷರೇ ಹುಬ್ಬೇರಿಸುವಂತೆ ತಮ್ಮ ಕೀರ್ತಿ ಪತಾಕೆ ಹಾರಿಸಿದವರು. ಭಾರತ ಮಾತ್ರವಲ್ಲದೆ, ವಿದೇಶದಲ್ಲಿಯೂ ನೀರಾವರಿ ಯೋಜನೆಗಳನ್ನು ರೂಪಿಸಿದ ಅಪ್ರತಿಮ ಸಾಧಕನ ಜನ್ಮದಿನವನ್ನು ಇಂಜಿನಿಯರ್ಸ್ ಡೇ ಎಂದು ಆಚರಿಸಲಾಗುತ್ತಿದೆ.