ಫೋಟೊ ಗ್ಯಾಲರಿ

10-08-21 02:25 pm ಫೋಟೊ

'ಇಂಡಿಯನ್ ಐಡಲ್' ಫಿನಾಲೆಯಲ್ಲಿ ಕರಾವಳಿ ಗಾಯಕ ನಿಹಾಲ್ ತಾವ್ರೋ

ಸೋನಿ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಪ್ರಸಿದ್ಧ ಹಿಂದಿ ಗಾಯನ ಸ್ಪರ್ಧೆಯಲ್ಲಿ ಕರ್ನಾಟಕದ ಗಾಯಕ ನಿಹಾಲ್ ತಾವ್ರೋ ಫಿನಾಲೆ ತಲುಪಿದ್ದಾರೆ. ಮೂಡಬಿದರಿಯ ಕಡಲಕೆರೆ ಪರಿಸರದ ನಿಹಾಲ್ ತಾವ್ರೋ ಇಂಡಿಯನ್ ಐಡಲ್ ಶೋನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಪ್ರೇಕ್ಷಕರ ನೆಚ್ಚಿನ ಸ್ಪರ್ಧಿಯಾಗಿದ್ದಾರೆ. ಇದೀಗ ಅಂತಿಮ ಕಣದಲ್ಲಿ ಒಟ್ಟು 6 ಮಂದಿ ಗಾಯಕರಿದ್ದಾರೆ. ಪ್ರಶಸ್ತಿಗಾಗಿ ಈ 6 ಮಂದಿಯ ನಡುವೆ ಬಾರಿ ಪೈಪೋಟಿ ಏರ್ಪಟ್ಟಿದೆ.