ಫೋಟೊ ಗ್ಯಾಲರಿ

22-09-21 04:35 pm ಫೋಟೊ

ಬಿಚ್ಚಿಬಿದ್ದ ಮೆಲ್ಪರ್ನ್ ನಗರದ ಜನ !

ಆಸ್ಟ್ರೇಲಿಯಾದ ಎರಡನೇ ಅತಿದೊಡ್ಡ ನಗರವಾಗಿರುವ ಮೆಲ್ಬರ್ನ್ ನಲ್ಲಿ 5.8ರ ತೀವ್ರತೆಯ ಭೂಕಂಪ ಆಗಿದ್ದು, ನಗರದ ಜನರು ಒಮ್ಮೆಲೇ ಬೆಚ್ಚಿ ಬಿದ್ದಿದ್ದಾರೆ. ಒಮ್ಮಿಂದೊಮ್ಮಿಗೆ ನಗರದಾದ್ಯಂತ ನಡುಕ ಉಂಟಾಗಿದ್ದು ಕಟ್ಟಡಗಳ ಅಂಚು ತುಂಡಾಗಿ ಬಿದ್ದರೆ, ಬಾಗಿಲುಗಳು ಅದುರಿ ಬಡಿದಾಡಿವೆ. ರಸ್ತೆ ಉದ್ದಕ್ಕೂ ಕಾಂಕ್ರೀಟ್ ಸ್ಲಾಬ್, ಇಟ್ಟಿಗೆ ತುಂಡುಗಳು ಬಿದ್ದಿದ್ದವು. ಮೆಲ್ಬರ್ನ್ ನಗರದ ಸುತ್ತಮುತ್ತ ನೂರು ಕಿಮೀ ಆಸುಪಾಸಿನಲ್ಲಿ ಕಂಪನದ ಅನುಭವ ಆಗಿತ್ತು. ಸ್ಥಳೀಯ ಕಾಲಮಾನ ಬೆಳಗ್ಗೆ 9 ಗಂಟೆಗೆ ಘಟನೆ ಆಗಿದ್ದರಿಂದ ಹೆಚ್ಚು ವಾಹನ, ಜನರು ರಸ್ತೆಯಲ್ಲಿ ಇರಲಿಲ್ಲ.