ಫೋಟೊ ಗ್ಯಾಲರಿ

14-07-23 06:53 pm ಫೋಟೊ

ಭಾರತ ಬಾಹ್ಯಾಕಾಶ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಲು ಹೊರಟಿದೆ

ಚಂದ್ರನ ಮೇಲೆ ಗುರಿಯಿಟ್ಟ ಚಂದ್ರಯಾನ -3 ಉಪಗ್ರಹವನ್ನು ಹೊತ್ತ ಜಿಎಸ್ ಎಲ್ ವಿ ಮಾರ್ಕ್ 3 ಉಡಾವಣಾ ನೌಕೆಯು ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಜುಲೈ 14ರ ಮಧ್ಯಾಹ್ನ 2.35ಕ್ಕೆ ಆಗಸಕ್ಕೆ ಹಾರಿದೆ. ಬಾಹುಬಲಿ ರಾಕೆಟ್ ಎಂದು ಕರೆಯಲ್ಪಡುವ ಜಿಎಸ್‌ಎಲ್‌ವಿ ಮಾರ್ಕ್ - 3 ಚಂದ್ರನ ಮೇಲೆ ಇಳಿಯಬೇಕಾದ ಲ್ಯಾಂಡರ್ ವಿಕ್ರಮ್ ಅನ್ನು ಹೊತ್ತು ಸಾಗಿದ್ದು ಈ ಪ್ರಯಾಣವು 40 ದಿನಗಳದ್ದೆಂದು ಅಂದಾಜು ಹಾಕಲಾಗಿದೆ‌. ಆಗಸ್ಟ್ 23 ಅಥವಾ 24 ರ ವೇಳೆಗೆ ವಿಕ್ರಮ್ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯುವ ನಿರೀಕ್ಷೆಯಿದೆ.