ಫೋಟೊ ಗ್ಯಾಲರಿ

12-10-20 05:36 pm ಫೋಟೊ

ಮಣ್ಣು ಪರೀಕ್ಷೆಗೆ ರೆಡಿಯಾಗಿದೆ ರೋಬೋಟ್ ; ವಿದ್ಯಾರ್ಥಿಯ ಸಾಧನೆಗೆ ಸಿಕ್ಕೀತೇ ಗರಿಮೆ ?

ವಿಜ್ಞಾನದಿಂದ ರೈತರಿಗೆ ನೆರವಾಗಬೇಕು ಎನ್ನುವ ಉದಾತ್ತ ಧ್ಯೇಯ ಇಟ್ಟುಕೊಂಡಿರುವ ಸಾರ್ಥಕ್ ರೋಬೋಟ್ ಒಂದನ್ನು ಆವಿಷ್ಕರಿಸಿದ್ದಾನೆ. ಈ ರೋಬೋಟ್ ಜೊತೆಗೆ ಮೊಬೈಲ್ ಆಪ್ ಒಂದನ್ನೂ ಅಭಿವೃದ್ಧಿ ಪಡಿಸಿದ್ದಾನೆ. ರೋಬೋಟನ್ನು ಜಮೀನಿನಲ್ಲಿ ಬಿಟ್ಟರೆ ಮಣ್ಣನ್ನು ಪರೀಕ್ಷಿಸಿ, ಕೆಲವೇ ಸೆಕೆಂಡಿನಲ್ಲಿ ವರದಿಯನ್ನು ನೀಡುತ್ತದೆ. ಅಷ್ಟೇ ಅಲ್ಲ, ಮಣ್ಣು ಯಾವ ಬೆಳೆಗೆ ಸೂಕ್ತ ಎನ್ನುವುದನ್ನೂ ಹೇಳುತ್ತದೆ. ಮೊಬೈಲ್ ಎಪ್ಲಿಕೇಶನಲ್ಲಿ ರೈತನ ಕೈಗೇ ಮಣ್ಣಿನ ಗುಣಮಟ್ಟದ ಬಗ್ಗೆ ವರದಿ ಬರುತ್ತದೆ ಎನ್ನುತ್ತಾನೆ, ಸಾರ್ಥಕ್.