ಫೋಟೊ ಗ್ಯಾಲರಿ

07-02-23 01:18 pm ಫೋಟೊ

ಭೂಕಂಪ ; ಪರಿಹಾರ ಸಾಮಗ್ರಿ ಹೊತ್ತು ಟರ್ಕಿಯತ್ತ ಹೊರಟ ಭಾರತೀಯ ವಾಯುಸೇನಾ ವಿಮಾನ

ಟರ್ಕಿ ಮತ್ತು ಸಿರಿಯಾದಲ್ಲಿ ಸೋಮವಾರ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಸಾವು-ನೋವು ಸಂಭವಿಸಿದೆ. ಈ ದುರಂತದಲ್ಲಿ ಇಲ್ಲಿಯವರೆಗೆ 4000 ಸಾವಿರಕ್ಕೂ ಹೆಚ್ಚು ನಾಗರಿಕರು ಸಾವನ್ನಪ್ಪಿದ್ದರೆ, 16 ಸಾವಿರಕ್ಕೂ ಹೆಚ್ಚು ನಾಗರಿಕರು ಗಾಯಗೊಂಡಿದ್ದಾರೆ.

ಪ್ರಬಲ ಭೂಕಂಪದಿಂದಾಗಿ ಹಲವು ಗಗನಚುಂಬಿ ಕಟ್ಟಡಗಳು ಕುಸಿದು ಬಿದ್ದಿವೆ. ಹಲವು ಮನೆಗಳಿಗೆ ಹಾನಿಯಾಗಿದೆ. ನೂರಾರು ಮಂದಿ ನಾಗರಿಕರು ಅವಶೇಷಗಳಡಿ ಸಿಲುಕಿದ್ದಾರೆ. ಪ್ರಪಂಚದಾದ್ಯಂತದ ಅನೇಕ ರಾಷ್ಟ್ರಗಳು ಟರ್ಕಿಗೆ ಸಹಾಯ ಮಾಡಲು ಧಾವಿಸುತ್ತಿವೆ.
ಭೂಕಂಪ ಪೀಡಿತ ಟರ್ಕಿ ಮತ್ತು ಸಿರಿಯಾಕ್ಕೆ ಎನ್‌ಡಿಆರ್‌ಎಫ್ ತಂಡಗಳು, ಶೋಧ ಮತ್ತು ರಕ್ಷಣಾ ತಂಡಗಳು ಮತ್ತು ಪರಿಹಾರ ತಂಡಗಳೊಂದಿಗೆ ಪರಿಹಾರ ಸಾಮಗ್ರಿಗಳನ್ನು ಕಳುಹಿಸಲು ಭಾರತ ಸರ್ಕಾರ ಸೋಮವಾರ ನಿರ್ಧರಿಸಿತ್ತು.
ಈ ಸಂಬಂಧ ಪ್ರಧಾನಿ ಕಾರ್ಯಾಲಯವೂ ಟ್ವೀಟ್ ಮಾಡಿದೆ. ಟರ್ಕಿಯಲ್ಲಿ ಭೂಕಂಪದಿಂದ ಉಂಟಾದ ಮಾನವ ಮತ್ತು ಆರ್ಥಿಕ ನಷ್ಟದಿಂದ ನಾನು ದುಃಖಿತನಾಗಿದ್ದೇನೆ.
ಭಾರತೀಯ ವಾಯುಪಡೆಯ C-17 ವಿಶೇಷ ವಿಮಾನವು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ, ಎನ್ ಡಿಆರ್ ಎಫ್ ತಂಡಗಳೊಂದಿಗೆ ಟರ್ಕಿಗೆ ಹೊರಟಿದೆ. ಈ ತಂಡ ಟರ್ಕಿ ಮತ್ತು ಸಿರಿಯಾದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲಿದೆ.