ಫೋಟೊ ಗ್ಯಾಲರಿ

17-11-22 12:25 pm ಫೋಟೊ

ಸಹ್ಯಾದ್ರಿ ಗ್ರೌಂಡಿನಲ್ಲಿ Auto Expo ; ಆಕರ್ಷಣೆ ಗಿಟ್ಟಿಸಿದ ಪ್ರಸಾದ್ ಅಸೋಸಿಯೇಟ್ಸ್ ಐಷಾರಾಮಿ ಕಾರುಗಳು

ನಗರದ ಅಡ್ಯಾರಿನ ಸಹ್ಯಾದ್ರಿ ಕಾಲೇಜು ಆವರಣದಲ್ಲಿ ಆಟೋ ಎಕ್ಸ್ ಪೋ ಹೆಸರಲ್ಲಿ ಐಷಾರಾಮಿ ಕಾರುಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಪ್ರದರ್ಶನದಲ್ಲಿ ಮಂಗಳೂರಿನ ಪ್ರಸಾದ್ ಅಸೋಸಿಯೇಟ್ಸ್ ಗೆ ಸೇರಿದ ಐಷಾರಾಮಿ ಕಾರುಗಳು ಭಾರೀ ಜನಾಕರ್ಷಣೆ ಗಿಟ್ಟಿಸಿದವು.

ಹೈ ಎಂಡ್ ಮತ್ತು ಸ್ಪೋರ್ಟ್ಸ್ ಮಾಡೆಲ್ ಕಾರುಗಳು ಪ್ರದರ್ಶನದಲ್ಲಿ ಸೇರಿದ್ದವರ ಆಕರ್ಷಣೆಗೆ ಪಾತ್ರವಾಯಿತು. ಲ್ಯಾಂಬೋರ್ಗಿನಿ ಮತ್ತು ಆಡಿ ಆರ್-8 ಮಾದರಿಯ ಸ್ಪೋರ್ಟ್ಸ್ ಕಾರುಗಳನ್ನು ಪ್ರಸಾದ್ ಅಸೋಸಿಯೇಟ್ಸ್ ವತಿಯಿಂದ ಪ್ರದರ್ಶನಕ್ಕೆ ಇಡಲಾಗಿತ್ತು.
ಸಂಘಟಕರ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಸಿಕ್ಕಿದ್ದು, ಭಾರೀ ಸಂಖ್ಯೆಯಲ್ಲಿ ಸೇರಿದ ಜನರು ಐಷಾರಾಮಿ ಕಾರುಗಳನ್ನು ನೋಡಲು ಮುಗಿಬಿದ್ದರು.
ಇಂಜಿನಿಯರಿಂಗ್ ಕಾಲೇಜಿನ ಯುವಕ- ಯುವತಿಯರು ಸೇರಿದಂತೆ ಇತರೇ ಸಾರ್ವಜನಿಕರೆಲ್ಲ ಮೊಬೈಲ್ ಹಿಡಿದು ಕಾರಿನ ಫೋಟೋ ಕ್ಲಿಕ್ಕಿಸಿದರು.
ಆಡಿ ಆರ್- 8 ಕಾರು ಸ್ಪೋರ್ಟ್ಸ್ ಮಾಡೆಲ್ ನದ್ದಾಗಿದ್ದು, ಭಾರತದಲ್ಲಿ ಟಾಪ್ ಕಾರುಗಳಲ್ಲಿ ಒಂದಾಗಿದೆ.
ವಿಶೇಷ ರೀತಿಯ ಸೌಂಡ್ ನಿಂದಾಗಿ ಸ್ಪೋರ್ಟ್ಸ್ ಮಾಡೆಲ್ ಕಾರು ಸಹ್ಯಾದ್ರಿ ಆವರಣದಲ್ಲಿ ಸಂಚರಿಸುತ್ತಿದ್ದಾಗಲೇ ಅಭಿಮಾನಿಗಳು ಫೋಟೋ ಕ್ಲಿಕ್ಕಿಸಲು ಮುಂದಾಗಿದ್ದರು.
ಲ್ಯಾಂಬೋರ್ಗಿನಿ ಕೂಡ ಐಷಾರಾಮಿ ಸ್ಪೋರ್ಟ್ಸ್ ಮಾಡೆಲ್ ಕಾರು ಆಗಿದ್ದು, ಹೈಫೈ ಜನರು ಇದನ್ನು ಖರೀದಿಸುತ್ತಾರೆ.
ಇಡೀ ದೇಶದಲ್ಲಿಯೇ ಮಂಗಳೂರು ನಗರದಲ್ಲಿ ಟಾಪ್ ಎಂಡ್ ಕಾರುಗಳ ಕ್ರೇಜ್ ಹೆಚ್ಚಿದೆ. ಪ್ರಸಾದ್ ಅಸೋಸಿಯೇಟ್ಸ್ ದೆಹಲಿ, ಮುಂಬೈ, ಬೆಂಗಳೂರು, ಕೊಲ್ಕತ್ತಾ ಹೀಗೆ ಮೆಟ್ರೋ ಪಾಲಿಟನ್ ನಗರಗಳಲ್ಲಿಯೂ ಹೈ ಎಂಡ್ ಕಾರುಗಳನ್ನು ಮಾರಾಟ ಮಾಡುತ್ತದೆ.
ಇದೇ ಕಾರಣಕ್ಕೆ ಪ್ರಸಾದ್ ಅಸೋಸಿಯೇಟ್ಸ್ ಇತರೇ ಕಂಪನಿಗಳ ಜೊತೆ ಕಾರಿನ ಶೋನಲ್ಲಿ ಪಾಲ್ಗೊಳ್ಳಲು ಅವಕಾಶ ಪಡೆದಿತ್ತು.
ಕಾರು ಶೋದಲ್ಲಿ ಮಂಗಳೂರು, ಉಡುಪಿ ಜಿಲ್ಲೆಯ ವಿವಿಧ ಕಡೆಯ ಜನರು ಭಾಗವಹಿಸಿದ್ದರು.
ಹೆಚ್ಚಾಗಿ ಯುವ ಜನರೇ ಪಾಲ್ಗೊಂಡಿದ್ದರು. ಆದರೆ ನೋಡಲು ಆಕರ್ಷಣೆ ಗಿಟ್ಟಿಸುವ ಐಷಾರಾಮಿ ಕಾರುಗಳೇ ಎಲ್ಲರ ಆಕರ್ಷಣೆಯಾಗಿದ್ದವು.
ಜನರ ಕ್ರೇಜ್ ನೋಡಿದ ಪ್ರಸಾದ್ ಅಸೋಸಿಯೇಟ್ಸ್ ಮಾಲೀಕ ಪ್ರಸಾದ್ ಶೆಟ್ಟಿ ಭಾರೀ ಸಂತಸಗೊಂಡಿದ್ದಾರೆ.
ಯಾವುದೇ ರೀತಿಯ ಹೈಫೈ ಕಾರುಗಳ ಖರೀದಿಗೆ ಪ್ರಸಾದ್ ಅಸೋಸಿಯೇಟ್ಸ್(8792133333) ಸಂಪರ್ಕಿಸುವಂತೆ ಕೇಳಿಕೊಂಡಿದ್ದಾರೆ.