ಫೋಟೊ ಗ್ಯಾಲರಿ

18-06-22 02:01 pm ಫೋಟೊ

ಪ್ರಧಾನಿ ಮೋದಿ ಅವರ ತಾಯಿ ಹೀರಾಬೆನ್ ಅವರ 100 ನೇ ಜನ್ಮದಿನದ ಸಂಭ್ರಮದ ಚಿತ್ರಗಳು

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್‌ ಮೋದಿ ಅವರು ಇಂದು 100ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಶತಾಯುಷಿಯಾದ ತಾಯಿ ಹೀರಾಬೆನ್‌ ಅವರನ್ನು ಪ್ರಧಾನಿ ಮೋದಿ ಭೇಟಿಯಾದರು. ಗುಜರಾತ್‌ ರಾಜಧಾನಿ ಗಾಂಧೀನಗರದಲ್ಲಿರುವ ತಮ್ಮ ನಿವಾಸಕ್ಕೆ ಭೇಟಿ ನೀಡಿದ ಮೋದಿ, ತಾಯಿಯ ಹುಟ್ಟುಹಬ್ಬವನ್ನು ಆಚರಿಸಿದರು.

ಪ್ರಧಾನಿ ಮೋದಿ ತಮ್ಮ ತಾಯಿಗೆ ಸಿಹಿ ತಿನಿಸುವ ಮೂಲಕ ಜನ್ಮದಿನ ಆಚರಿಸಿದ್ದಾರೆ
ತಾಯಿ ಹೀರಾಬೆನ್ ಅವರ ಪಾದಗಳನ್ನು ಮುಟ್ಟಿ ಪ್ರಧಾನಿ ಮೋದಿ ನಮಸ್ಕರಿಸಿದರು.
ಪ್ರಧಾನಿ ಮೋದಿ ತಮ್ಮ ತಾಯಿಯವರ ಆರೋಗ್ಯದ ಕುರಿತು ವಿಚಾರಿಸಿದರು.
ಇಂದು ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಅವರ 100 ನೇ ಹುಟ್ಟುಹಬ್ಬದ ಅಂಗವಾಗಿ ಗಾಂಧಿನಗರಕ್ಕೆ ತೆರಳಿದ ಮೋದಿ ತಾಯಿಯ ಆಶೀರ್ವಾದ ಪಡೆದರು.