ಫೋಟೊ ಗ್ಯಾಲರಿ

06-10-22 11:36 am ಫೋಟೊ

ಮಂಗಳೂರು ದಸರಾ ಸಂಪನ್ನ ; ಶಾರದಾ ವಿಸರ್ಜನೆ ಕ್ಯಾಮರಾ ಕಣ್ಣಲ್ಲಿ...

ಮಂಗಳೂರು, ಅ.6: ಮಂಗಳೂರು ದಸರಾ ಎಂದೇ ಪ್ರಸಿದ್ಧಿ ಗಳಿಸಿರುವ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಒಂಬತ್ತು ದಿನಗಳ ಕಾಲ ಪೂಜಿಸಲ್ಪಟ್ಟ ಶಾರದೆ ಮತ್ತು ನವ ದುರ್ಗೆಯರ ವಿಗ್ರಹಗಳನ್ನು ವಿಜಯದಶಮಿ ದಿನ ಅದ್ದೂರಿ ಶೋಭಾಯಾತ್ರೆ ಬಳಿಕ ಕ್ಷೇತ್ರದ ಕೆರೆಯಲ್ಲಿ ವಿಸರ್ಜಿಸಲಾಯಿತು. ಅ.5ರ ಸಂಜೆ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಮೆರವಣಿಗೆಗೆ ಚಾಲನೆ ಕೊಟ್ಟರು. ಏಳು ಕಿಮೀ ಉದ್ದಕ್ಕೆ ರಾತ್ರಿಯಿಡೀ ನಗರ ಪ್ರದಕ್ಷಿಣೆ ಬಳಿಕ ಮರುದಿನ ಅ.6ರ ಬೆಳಗ್ಗೆ ಶಾರದೆಯ ವಿಸರ್ಜನೆ ಕ್ಯಾಮರಾ ಕಣ್ಣಿನಲ್ಲಿ ಕಂಡಿದ್ದು ಹೀಗೆ.. ಫೋಟೊ ; ಪುನಿಕ್ ಸ್ಟುಡಿಯೋ