ಫೋಟೊ ಗ್ಯಾಲರಿ

26-11-20 06:04 pm ಫೋಟೊ

ತಾಜ್ ಅಟ್ಯಾಕ್

2008ರ ನವೆಂಬರ್ ನಲ್ಲಿ ಪಾಕಿಸ್ತಾನ ಮೂಲದ ಇಸ್ಲಾಂ ಮೂಲಭೂತವಾದದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾದ ಸುಮಾರು 12 ಜನ ಉಗ್ರರು ತಂತ್ರಗಾರಿಕೆಯಿಂದ ಪಾಕಿಸ್ತಾನದಿಂದ ಭಾರತದ ಒಳ ನುಸುಳಿದ್ದು ಅಲ್ಲದೆ ಸತತ ಮೂರು ದಿನಗಳ ಕಾಲ ಮುಂಬಯಿ ನಗರವನ್ನು ಗುರಿಯಾಗಿಸಿಕೊಂಡು ಬಾಂಬು ಮತ್ತು ಗುಂಡಿನ ಮಳೆಗರೆದು ಸಾರ್ವಜನಿಕ ಜೀವನ ಹಾಗು ಅಪಾರ ಆಸ್ತಿ-ಪಾಸ್ತಿ ನಷ್ಟಗಳಿಗೆ ಕಾರಣರಾದರು. ಮುಂಬಯಿ ಮಹಾನಗರ ಮೂರು ದಿನಗಳ ಕಾಲ ಭಯೋತ್ಪಾದಕರ ಕಪಿ ಮುಷ್ಟಿಯಲ್ಲಿ ಸಿಲುಕಿ ಅಕ್ಷರಶಃ ನರಕ ದರ್ಶನ ಮಾಡಿತು. ದಾಳಿ ಮುಗಿದು ಎಲ್ಲ ಉಗ್ರರನ್ನು ಭಾರತದ ಸೇನೆ ಹಾಗು ದೇಶದ ಆಂತರಿಕ ಪೋಲಿಸ್ ಪಡೆ ಹತ್ಯೆ ಮಾಡಿತು. ಅದರಲ್ಲಿ ಒಬ್ಬ ಉಗ್ರನನ್ನು ಜೀವಂತವಾಗಿ ಸೆರೆ ಹಿಡಿಯುವಲ್ಲಿ ಸಫಲವಾಯಿತು.