ಫೋಟೊ ಗ್ಯಾಲರಿ

08-10-20 12:04 pm ಫೋಟೊ

'ಮಳೆ' ಖ್ಯಾತಿಯ ಭಟ್ಟರಿಗೆ ಹುಟ್ಟುಹಬ್ಬದ ಸಂಭ್ರಮ...

ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರಲ್ಲಿ ಒಬ್ಬರಾದ ಯೋಗರಾಜ ಭಟ್ ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮಂದಾರ್ತಿಯವರು. ಹೆತ್ತವರು ಧಾರವಾಡದಲ್ಲಿ ನೆಲೆಸಿದ್ದರಿಂದ ಅಲ್ಲಿಯೇ ಶಿಕ್ಷಣ ಪಡೆದು ಬೆಂಗಳೂರಿಗೆ ತೆರಳಿದ್ದ ಭಟ್ಟರು ಬಳಿಕ ಕನ್ನಡ ಇಂಡಸ್ಟ್ರಿ ಸೇರಿದ್ದರು. ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ ಜೊತೆಯಲ್ಲಿ ಸಹಾಯಕ ನಿರ್ದೇಶಕರಾಗಿ ಚಿತ್ರರಂಗ ಪ್ರವೇಶ ಮಾಡಿದ್ದರು. "ಮಣಿ" ಯೋಗರಾಜ್ ಭಟ್ ನಿರ್ದೇಶನದ ಮೊದಲ ಚಿತ್ರ. ಮುಂಗಾರು ಮಳೆ ಅವರಿಗೆ ದೊಡ್ಡ ಮಟ್ಟಿನ ಖ್ಯಾತಿಯನ್ನು ತಂದುಕೊಟ್ಟಿತು. ಇಂದು ಅವರಿಗೆ 47ನೇ ಹುಟ್ಟುಹಬ್ಬದ ಸಂಭ್ರಮ.