ಫೋಟೊ ಗ್ಯಾಲರಿ

28-09-21 01:35 pm ಫೋಟೊ

ಜಗತ್ತಿನ 196 ದೇಶಗಳನ್ನೂ ಸುತ್ತಿ ಬಂದ 21ರ ಯುವತಿ

ಜಗತ್ತು ಸುತ್ತಬೇಕು. ಯುರೋಪ್, ಅಮೆರಿಕ, ಸ್ವಿಜರ್ಲ್ಯಾಂಡ್, ಜಪಾನ್ ನೋಡಬೇಕು. ಸಿಂಗಾಪುರ, ಹಾಂಕಾಂಗಿನ ಮಿಂಚುವ ಸಿಟಿ ನೋಡಿ ಬರಬೇಕು. ಇಂಥ ಆಸೆ ಯಾರಿಗಿಲ್ಲ ಹೇಳಿ. ಆದರೆ, ಯಾರು ಕೂಡ ಜಗತ್ತಿನ ಎಲ್ಲ ದೇಶಗಳನ್ನು ಸುತ್ತಾಡಿದವರು ಇಲ್ಲ. ಇದ್ದರೂ, ಆತನ ಜೀವಿತಾವಧಿ ಮುಗಿದಿರುತ್ತದೆ. ಆದರೆ, ಅಮೆರಿಕದ 21ರ ಹರೆಯದ ಹುಡುಗಿಯೊಬ್ಬಳು ಜಗತ್ತಿನಲ್ಲಿರುವ ಎಲ್ಲ ದೇಶಗಳನ್ನೂ ಸುತ್ತಿ ಬಂದಿದ್ದಾಳೆ. ಅಷ್ಟೇ ಅಲ್ಲ, ಜಗತ್ತು ಸುತ್ತಿ ಬಂದ ಅತಿ ಕಿರಿಯ ಯುವತಿ ಎಂಬ ದಾಖಲೆಯನ್ನೂ ಸಾಧಿಸಿ, ಗಿನ್ನೆಸ್ ರೆಕಾರ್ಡ್ ಮಾಡಿದ್ದಾಳೆ.