ಫೋಟೊ ಗ್ಯಾಲರಿ

21-08-20 10:02 pm ಫೋಟೊ

ಗಣೇಶನ ಮೂರ್ತಿಯ ಮುಂದೆ ಮುಗ್ಧ ಮಗುವೊಂದು ಫೋಟೊಗ್ರಾಫರ್ ಕಣ್ಣಲ್ಲಿ ಕಂಡಿದ್ದು ಹೀಗೆ

ಗಣೇಶನೆಂದರೆ ಅದೊಂದು ಪುಳಕ. ಅದೇನೊ ಬುದ್ಧಿಗೆ ನಿಲುಕದ ಆಕರ್ಷಣೆ. ಆನೆಯ ಮುಖ ಹೊತ್ತ ಗಜಮುಖನೇ ಒಂದು ಅಚ್ಚರಿ. ಮಕ್ಕಳಂತೂ ಕಣ್ಣು ಬಾಯಿ ಬಿಟ್ಟು ಗಣಪನನ್ನು ನೋಡುವುದೇ ಚಂದ. ಪ್ರಥಮ‌ ವಂದಿತ, ವಿಘ್ನ ವಿನಾಶಕನೆಂಬ ಹೆಗ್ಗಳಿಕೆ ಹೊತ್ತ ಗಣಪನ ಹುಟ್ಟಿದ ಹಬ್ಬವೇ ಗಣೇಶ ಚತುರ್ಥಿ. ಕೃಷ್ಣಾಷ್ಟಮಿಗೆ ಮುದ್ದು ಕೃಷ್ಣರಾಗಿ ಕಣ್ಮನ ಸೆಳೆಯವ ಪುಟಾಣಿ ಮಕ್ಕಳು ಅಷ್ಟಮಿ ಕಳೆದು ಎಂಟೇ ದಿನಕ್ಕೆ ಬರುವ ಗಣೇಶನ ಹಬ್ಬದಂದು ಚೇಷ್ಟೆಯಲ್ಲಿ ತೊಡಗುತ್ತಾರೆ‌. ಗಣೇಶನ ಮೂರ್ತಿಯ ಮುಂದೆ ಮುಗ್ಧ ಮಗುವೊಂದು ಫೋಟೊಗ್ರಾಫರ್ ಕಣ್ಣಲ್ಲಿ ಕಂಡಿದ್ದು ಹೀಗೆ.. ಫೋಟೊ ; ಪುನಿಕ್ ಶೆಟ್ಟಿ, ಮಂಗಳೂರು