ಫೋಟೊ ಗ್ಯಾಲರಿ

24-05-21 05:50 pm ಫೋಟೊ

ಪೊಲೀಸರ ಆರೋಗ್ಯಕ್ಕೆ ಹ್ಯಾಂಗ್ಯೋ ಸಾಥ್ ; 1600 ಸಿಬಂದಿಗೆ ಇಮ್ಯುನಿಟಿ ಹಾಲು, ಚಿಕ್ಕಿ

ಕೊರೊನಾ ಲಾಕ್ಡೌನಲ್ಲಿ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡೋರಂದ್ರೆ ಪೊಲೀಸರು. ಎಲ್ಲ ಜನ ಮನೆಯಲ್ಲಿ ಕುಳಿತರೂ, ಪೊಲೀಸರು ಮಾತ್ರ ಬೀದಿ ಕಾಯಲೇಬೇಕು ಎನ್ನುವ ಸ್ಥಿತಿ. ಹೀಗಾಗಿ ವಿವಿಧ ಸಂಸ್ಥೆಗಳು ಪೊಲೀಸರಿಗೆ ಊಟ, ಚಹಾ, ತಿಂಡಿ ಕೊಡಲು ಮುಂದೆ ಬಂದಿದ್ದಾರೆ. ಆದರೆ, ಮಂಗಳೂರು ಪೊಲೀಸ್ ಕಮಿಷನರ್ ಅಗತ್ಯವಿದ್ದುದನ್ನು ಮಾತ್ರ ಸ್ವೀಕರಿಸುತ್ತಿದ್ದಾರೆ. ಪೊಲೀಸರಿಗೆ ಬೇರೆ ಯಾವ ವಿಧದಲ್ಲಿ ನೆರವಾಗಬಹುದು ಎಂದು ಯೋಚನೆ ಮಾಡಿದ ಮಂಗಳೂರಿನ ಟಿವಿಎಸ್ ಟು - ವೀಲರ್ ಶೋರೂಮ್ ಸಂಸ್ಥೆಯವರು ವಿಭಿನ್ನ ರೀತಿಯ ಸೇವೆ ನೀಡಿದ್ದಾರೆ.