ಫೋಟೊ ಗ್ಯಾಲರಿ

28-11-22 08:50 pm ಫೋಟೊ

ತಾಳಿ ಕಟ್ಟುವ ಶುಭ ವೇಳೆ; ಅದಿತಿ ಪ್ರಭುದೇವ-ಯಶಸ್ವಿ ಮದುವೆ ಫೋಟೋ ಗ್ಯಾಲರಿ

ಇಂದು ಬೆಳಗ್ಗೆ 9.30 ರಿಂದ 10.32 ನಡುವಿನ ಶುಭ ಮುಹೂರ್ತದಲ್ಲಿ ಯಶಸ್‌ ಪಟ್ಲ, ಅದಿತಿ ಕೊರಳಿಗೆ ಮಾಂಗಲ್ಯಧಾರಣೆ ಮಾಡಿದ್ದಾರೆ.

ನವ ದಂಪತಿಗೆ ಸ್ಯಾಂಡಲ್‌ವುಡ್‌, ರಾಜಕೀಯ ಗಣ್ಯರು ಶುಭ ಹಾರೈಸಿದ್ದಾರೆ. ಅಭಿಮಾನಿಗಳು ಕೂಡಾ ಸೋಷಿಯಲ್‌ ಮೀಡಿಯಾ ಮೂಲಕ ನವ ದಂಪತಿಗೆ ಶುಭ ಹಾರೈಸುತ್ತಿದ್ದಾರೆ.
ಅದಿತಿ ದಾವಣಗೆರೆಯವರಾದರೆ, ಯಶಸ್ವಿ ಪಟ್ಲ ಚಿಕ್ಕಮಗಳೂರಿನವರು. ಇಬ್ಬರದ್ದೂ ಹಿರಿಯರು ನೋಡಿ ನಿಶ್ಚಯಿಸಿರುವ ಮದುವೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಅದಿತಿ ಪ್ರಭುದೇವ, ಯಶಸ್‌ ಜೊತೆ ಇರುವ ಫೋಟೋವೊಂದನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡು ನಿಶ್ಚಿತಾರ್ಥ ಮಾಡಿಕೊಂಡಿರುವ ಸುದ್ದಿಯನ್ನು ಅಭಿಮಾನಿಗಳಿಗೆ ತಿಳಿಸಿದ್ದರು.
ನವೆಂಬರ್‌ 26 ರಿಂದಲೇ ಮದುವೆ ಶಾಸ್ತ್ರಗಳು ಆರಂಭವಾಗಿದ್ದವು. ಶನಿವಾರ ಅದಿತಿ, ಹಳದಿ ಶಾಸ್ತ್ರದ ಫೋಟೋಗಳನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
ನವೆಂಬರ್‌ 27 ರಂದು ಪ್ಯಾಲೇಸ್‌ ಗ್ರೌಂಡ್‌ನ ಗಾಯತ್ರಿ ವಿಹಾರದಲ್ಲಿ ಮೆಹಂದಿ ಕಾರ್ಯಕ್ರಮ ಕೂಡಾ ನೆರವೇರಿತ್ತು. ಈ ಫೋಟೋಗಳನ್ನು ಕೂಡಾ ಅದಿತಿ ಹಾಗೂ ಯಶಸ್‌ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
ನನಗೆ ಸಾಫ್ಟ್‌ವೇರ್‌ ಹುಡುಗನಿಗಿಂತ ರೈತ ಕುಟುಂಬದ ಹುಡುಗ ಬಹಳ ಇಷ್ಟ ಎಂದು ಅದಿತಿ ಬಹಳಷ್ಟು ಸಾರಿ ಹೇಳಿದ್ದರು. ಅದರಂತೆ ಅದಿತಿಗೆ ತಾವು ಇಷ್ಟಪಟ್ಟ ಹುಡುಗನೇ ಜೀವನ ಸಂಗಾತಿಯಾಗಿ ದೊರೆತಿದ್ದಾರೆ.
ಅದಿತಿ ಮದುವೆಗೆ ಆಗಮಿಸಿ ಶುಭ ಕೋರಿದ ಸಚಿವ ವಿ. ಸೋಮಣ್ಣ
ಅದಿತಿ ಹಾಗೂ ಯಶಸ್‌ ಆರತಕ್ಷತೆ ಫೋಟೋ
ನವೆಂಬರ್‌ 27 ರಂದು ನಡೆದ ಆರಕ್ಷತೆಯಲ್ಲಿ ಭಾಗಿಯಾಗಿದ್ದ ರಾಧಿಕಾ ಪಂಡಿತ್‌ ಹಾಗೂ ಯಶ್
ಆರತಕ್ಷತೆಯಲ್ಲಿ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು