ಫೋಟೊ ಗ್ಯಾಲರಿ

14-12-22 01:28 pm ಫೋಟೊ

ಕಾಂತಾರ ಎಫೆಕ್ಟ್ ; ನನಗೆ ರಿಷಬ್‌ ಶೆಟ್ಟಿ ನೋಡಿದರೆ ಹೊಟ್ಟೆಉರಿ, ನವಾಜುದ್ದೀನ್‌ ಸಿದ್ದಿಕಿ

ಬಾಲಿವುಡ್‌ ಕಾರ್ಯಕ್ರಮವೊಂದರಲ್ಲಿ ಇತ್ತೀಚೆಗಷ್ಟೇ ನವಾಜುದ್ದೀನ್‌ ಮತ್ತು ರಿಷಬ್‌ ಇಬ್ಬರೂ ಮುಖಾಮುಖಿಯಾಗಿದ್ದಾರೆ. ಈ ವೇಳೆ ನಟ ನವಾಜುದ್ದೀನ್‌ ಸಿದ್ದಿಕಿ ನನಗೆ ರಿಷಬ್‌ ಶೆಟ್ಟಿ ನೋಡಿದರೆ ಹೊಟ್ಟೆಉರಿ ಎಂದು ಹೇಳಿಕೊಂಡಿದ್ದರು.

ಅದಾದ ಬಳಿಕ ನವಾಜುದ್ದೀನ್‌ ಮನೆಯಲ್ಲಿಯೇ ಮಾತುಕತೆಯೂ ನಡೆಸಿದ್ದರು. ರಿಷಬ್‌ ಶೆಟ್ಟಿ, ಪ್ರಮೋದ್‌ ಶೆಟ್ಟಿ ಸೇರಿ ಇನ್ನು ಕೆಲ ಸ್ನೇಹಿತರು ಚರ್ಚೆ ನಡೆಸಿದ್ದರು.
ಹೀಗೆ ಈ ಚರ್ಚೆಯ ಫೋಟೋಗಳನ್ನು ಶೇರ್‌ ಮಾಡಿದ ರಿಷಬ್‌, ನವಾಜ್‌ ಸರ್‌ ಜತೆಗೆ ರಂಗಭೂಮಿ, ನಟನೆ ಮತ್ತು ಸಿನಿಮಾ ಬಗ್ಗೆ ಚರ್ಚಿಸಲಾಯಿತು ಎಂದು ಬರೆದುಕೊಂಡಿದ್ದರು.
ಈ ಫೋಟೋಕ್ಕೆ ಪ್ರತಿಕ್ರಿಯೆ ನೀಡಿದ ನವಾಜುದ್ದೀನ್, ಮಾತುಕತೆ ಇನ್ನೂ ಮುಗಿದಿಲ್ಲ. ಶೀಘ್ರದಲ್ಲಿ ಅದನ್ನು ಮುಂದುವರಿಸೋಣ..‌ ಚಿಯರ್ಸ್‌ ಎಂದು ಹೇಳಿದ್ದಾರೆ.