ಫೋಟೊ ಗ್ಯಾಲರಿ

18-06-22 07:32 pm ಫೋಟೊ

ತನ್ನನ್ನೇ ತಾನೇ ಮದುವೆಯಾದ ಯುವತಿ ; ಗೋವಾದಲ್ಲಿ ಒಬ್ಬಂಟಿಯಾಗೇ ಹನಿಮೂನ್‌ ಮುಗಿಸಿದ್ರು Self Married​ ಕ್ಷಮಾ..!

ಶಾಸ್ತ್ರೋಕ್ತವಾಗಿಯೇ ತನ್ನನ್ನು ತಾನೇ ಮದುವೆಯಾಗುವಲ್ಲಿ ಯಶಸ್ವಿಯಾಗಿದ್ದ ಈ ಯುವತಿ ಇದೀಗ ಹನಿಮೂನ್‌ ಕೂಡ ಮುಗಿಸಿದ್ದಾರೆ. ಇಂತಹದ್ದೊಂದು ಅಚ್ಚರಿದಾಯಕ ಮದುವೆ ಹಾಗೂ ಊಹಿಸಲೂ ಆಗದ ಹನಿಮೂನ್‌ ಮುಗಿದಿದ್ದು ಭಾರತದಲ್ಲಿ ಇದೇ ಮೊದಲ ಬಾರಿಗೆ.

ಶಾಸ್ತ್ರೋಕ್ತವಾಗಿಯೇ ತನ್ನನ್ನು ತಾನೇ ಮದುವೆಯಾಗುವಲ್ಲಿ ಯಶಸ್ವಿಯಾಗಿದ್ದ ಈ ಯುವತಿ ಇದೀಗ ಹನಿಮೂನ್‌ ಕೂಡ ಮುಗಿಸಿದ್ದಾರೆ.
ಗೋವಾದಲ್ಲಿ ಒಬ್ಬಂಟಿಯಾಗಿ ತಾವು ಕಳೆದ ಸುಂದರ ಕ್ಷಣಗಳನ್ನು ಹಂಚಿಕೊಂಡಿದ್ದು ಫೋಟೋಗಳಿಗೆ ಶೀರ್ಷಿಕೆ ಕೂಡ ಬರೆದುಕೊಂಡಿದ್ದಾರೆ.
ಹನಿಮೂನ್​ ಬಗ್ಗೆ ಹೆಚ್ಚಿಗೆ ಹೇಳಿದ ಅವರು 'ಜನರು ನಮ್ಮನ್ನು ಹತ್ತಿಕ್ಕಲು ಬಂದಷ್ಟು ನಾವು ಮತ್ತಷ್ಟು ಬಲಶಾಲಿಯಾಗುತ್ತೇವೆ ಎಂದು ಬರೆದಿದ್ದಾರೆ.
ಗುಜರಾಜ್‌ನ ನಿವಾಸಿಯಾಗಿರುವ ಈ ಯುವತಿ ಇದೆ ತಿಂಗಳ ಜೂನ್ 8 ರಂದು ತನಗೆ ತಾನೇ ಮಾಂಗಲ್ಯ ಕಟ್ಟಿಕೊಂಡು ಹಸೆಮಣೆ ಏರಿದ್ದರು.
ಮದುವೆ ಕಾರ್ಯಕ್ರಮ ನಡೆದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿದ್ದ ಕ್ಷಮಾ, ಎಲ್ಲರಿಗೂ ಧನ್ಯವಾದ ತಿಳಿಸಿದ್ದರು.
ಅದಕ್ಕೂ ಮುನ್ನ ತನ್ನೊಂದಿಗೆ ತಾನೇ ವಿವಾಹ ಮಾಡಿಕೊಳ್ಳುವುದಾಗಿ ಹೇಳಿದ್ದ ಈ ಯುವತಿ ಸ್ವಪ್ರೇಮಕ್ಕೆ ನಾನೇ ಒಂದು ಉದಾಹರಣೆ ಎಂದಿದ್ದರು.
ತನ್ನನ್ನು ತಾನೇ ಮದುವೆ ಮಾಡಿಕೊಳ್ಳುವುದಾಗಿ ಘೋಷಣೆ ಮಾಡಿದ್ದ ಕ್ಷಮಾ, ಬಿಜೆಪಿ ಸೇರಿದಂತೆ ಹಲವರಿಂದ ಸಿಕ್ಕಾಪಟ್ಟೆ ವಿರೋಧಕ್ಕೊಳಗಾಗಿದ್ದರು.
ಇಂತಹದೊಂದು ಅಚ್ಚರಿದಾಯಕ ಮದುವೆ ಹಾಗೂ ಊಹಿಸಲೂ ಆಗದ ಹನಿಮೂನ್‌ ಮುಗಿದಿದ್ದು ಭಾರತದಲ್ಲಿ ಇದೇ ಮೊದಲ ಬಾರಿಗೆ.