ಫೋಟೊ ಗ್ಯಾಲರಿ

15-10-20 03:49 pm ಫೋಟೊ

ಕ್ಷಿಪಣಿ ಪಿತಾಮಹನ 89 ನೇ ಜನ್ಮದಿನಾಚರಣೆ

ಈ ದೇಶ ಕಂಡ ಅದ್ಭುತ ವ್ಯಕ್ತಿ ಎಪಿಜೆ ಅಬ್ದುಲ್ ಕಲಾಂ. ಭಾರತದ 10ನೇ ರಾಷ್ಟ್ರಪತಿಯಾಗಿದ್ದ ಕಲಾಂ, 1931ರ ಅಕ್ಟೋಬರ್ 15ರಂದು ತಮಿಳ್ನಾಡಿನ ರಾಮೇಶ್ವರದಲ್ಲಿ ಜನಿಸಿದ್ದರು. ಡಿಆರ್ ಡಿಓ ವಿಜ್ಞಾನಿಯಾಗಿ ಹೆಸರು ಮಾಡಿದ ಕಲಾಂ ಭಾರತದ ಕ್ಷಿಪಣಿ ಪಿತಾಮಹ ಎಂಬ ಹಿರಿಮೆ ಗಳಿಸಿದ್ದರು. ಕೇಂದ್ರದಲ್ಲಿ ವಾಜಪೇಯಿ ಸರಕಾರ ಇದ್ದಾಗ ಪೋಖ್ರಾಣ್ ಅಣು ಸ್ಫೋಟದ ಮೂಲಕ ಭಾರತದ ಬಳಿಯೂ ಅಣ್ವಸ್ತ್ರ ಇರುವುದನ್ನು ಸಾರಿದ್ದು ಅಬ್ದುಲ್ ಕಲಾಂ.. ಅಂಥ ಮಹಾನ್ ಚೇತನಕ್ಕೆ ಇಂದು 89ನೇ ಹುಟ್ಟುಹಬ್ಬ.