ಫೋಟೊ ಗ್ಯಾಲರಿ

03-10-20 12:44 pm ಫೋಟೊ

ಕಲಾವಿದರ ಕೈಚಳಕ ; ಗೋಡೆಯಲ್ಲಿ ಎದ್ದು ಕುಳಿತ ಮೀನು ವ್ಯಾಪಾರಿ ಮಹಿಳೆ !

ತಮ್ಮ ಜೀವ ಪಣಕ್ಕಿಟ್ಟು ಸಮುದ್ರದಲ್ಲಿ ಮೀನು ಹಿಡಿಯುವುದನ್ನೇ ವೃತ್ತಿಯಾಗಿಸಿಕೊಂಡವರು ಬೆಸ್ತರು. ಮೊಗವೀರ ಸಮುದಾಯದ ಶ್ರಮ ಜೀವನಕ್ಕೆ ಯಾವುದೇ ರೀತಿಯಲ್ಲು ಬೆಲೆ ಕಟ್ಟಲಾಗದು. ಇದೇ ಆಶಯದ ಹಿನ್ನೆಲೆಯಲ್ಲಿ ಮೀನು ವ್ಯಾಪಾರದ ವೃತ್ತಿ ಮಾಡುವ ಮಹಿಳೆಯ ಚಿತ್ರವನ್ನು ಕಲಾವಿದರು ಉರ್ವ ಮೀನು ಮಾರ್ಕೆಟ್ ಗೋಡೆಯಲ್ಲಿ ಚಿತ್ರಿಸಿದ್ದು ಈಗ ಸಾರ್ವಜನಿಕರ ಆಕರ್ಷಣೆಗೆ ಕಾರಣವಾಗಿದೆ.