ಫೋಟೊ ಗ್ಯಾಲರಿ

19-06-21 11:52 am ಫೋಟೊ

ಒಲಿಂಪಿಕ್ ವೀರ, ಫ್ಲೈಯಿಂಗ್ ಸಿಖ್ ಖ್ಯಾತಿಯ ಮಿಲ್ಖಾ ಸಿಂಗ್ ಇನ್ನಿಲ್ಲ !

‘ಫ್ಲೈಯಿಂಗ್ ಸಿಖ್‘ ಖ್ಯಾತಿಯ ಅಥ್ಲೀಟ್, ಭಾರತ ಕಂಡ ಅತ್ಯಂತ ಅಪರೂಪದ ಒಲಿಂಪಿಕ್ ವೀರ ಮಿಲ್ಖಾ ಸಿಂಗ್ (91) ಶುಕ್ರವಾರ ತಡರಾತ್ರಿ ನಿಧನರಾಗಿದ್ದಾರೆ. ಕೋವಿಡ್‌ ಸೋಂಕಿಗೆ ಒಳಗಾಗಿದ್ದ ಅವರು ಚಂಡೀಗಢದ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಅವರ ಪತ್ನಿ, ಭಾರತ ವಾಲಿಬಾಲ್ ತಂಡದ ಮಾಜಿ ನಾಯಕಿಯಾಗಿದ್ದ ನಿರ್ಮಲ್ ಕೌರ್ ಅವರು ಇತ್ತೀಚೆಗಷ್ಟೇ ಕೋವಿಡ್‌ನಿಂದ ಸಾವು ಕಂಡಿದ್ದರು. ಮಿಲ್ಖಾ ಸಿಂಗ್ ಅವರು ಮಗ, ಗಾಲ್ಫ್ ಆಟಗಾರ ಜೀವ್ ಮಿಲ್ಕಾಸಿಂಗ್ ಮತ್ತು ಮಗಳು ಸೇರಿದಂತೆ ದೇಶಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಅಗಲಿದ್ದಾರೆ.