ಫೋಟೊ ಗ್ಯಾಲರಿ

23-01-21 04:57 pm ಫೋಟೊ

ನಿಜ ಅರ್ಥದ ನೇತಾ ನೇತಾಜಿ !

ದೇಶ ಕಂಡ ಅಪ್ರತಿಮ ದೇಶಭಕ್ತ, ಅವಿಭಜಿತ ಭಾರತದ ಮೊದಲ ಪ್ರಧಾನಿಯಾಗಿದ್ದ ನೇತಾಜಿ ಸುಭಾಶ್ಚಂದ್ರ ಬೋಸರ 125ನೇ ಜನ್ಮದಿನ ಇಂದು. 1897ರ ಜ.23ರಂದು ಪಶ್ಚಿಮ ಬಂಗಾಳದಲ್ಲಿ ಹುಟ್ಟಿದ ನೇತಾಜಿ ನಿಜ ಅರ್ಥದಲ್ಲಿ ನೇತಾಜಿ ಆಗಿದ್ದವರು. ಜಗತ್ತಿನಲ್ಲೇ ಮೊದಲ ಬಾರಿಗೆ ಮಹಿಳೆಯರನ್ನು ಸೇನೆಗೆ ಸೇರಿಸಿ, ಪ್ರತ್ಯೇಕ ಸೇನೆ ಕಟ್ಟಿದ್ದ ಸುಭಾಸರ ಸಾಹಸಕ್ಕೆ ಸಾಟಿಯಿಲ್ಲ. ದೇಶ ಇಂದು ಸುಭಾಸರನ್ನು ಅಪ್ರತಿಮ ಹೋರಾಟಗಾರ, ದೇಶಭಕ್ತ, ವೀರ ರಾಷ್ಟ್ರೀಯವಾದಿಯೆಂದು ಗೌರವಿಸುತ್ತಿದೆ. ಕೇಂದ್ರ ಸರಕಾರ ಈ ಬಾರಿ ನೇತಾಜಿ ಜನ್ಮದಿನವನ್ನು ಪರಾಕ್ರಮ್ ದಿವಸ್ ಎಂಬ ಹೆಸರಲ್ಲಿ ಆಚರಿಸುತ್ತಿದೆ.