ಫೋಟೊ ಗ್ಯಾಲರಿ

03-10-25 11:29 am ಫೋಟೊ

ಶಾರದೆ ನಿನ್ನ ನೋಡಲೆರಡು ಕಣ್ಣು ಸಾಲದೇ ! ಮಂಗಳೂರಿನಲ್ಲಿ ಅದ್ದೂರಿ ದಸರಾ ಶೋಭಾಯಾತ್ರೆ

ಮಂಗಳೂರು ದಸರಾ ಎಂದೇ ಖ್ಯಾತಿ ಪಡೆದಿರುವ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ 11 ದಿನಗಳಿಂದ ಪೂಜೆಗೊಂಡ ಶಾರದೆ ಮತ್ತು ನವದುರ್ಗೆಯರ ಮೃಣ್ಮಯ ಮೂರ್ತಿಗಳ ಶೋಭಾಯಾತ್ರೆ ಅದ್ದೂರಿಯಾಗಿ ನಡೆಯಿತು. ಸಂಜೆ ವೇಳೆಗೆ ಶಾರದೆ ಹೊರಡುವ ಸಮಯಕ್ಕೆ ಮಳೆಯ ಸಿಂಚನವಾದರೂ ಆಬಳಿಕ ಮಳೆ ಬಿಡುವು ನೀಡಿತ್ತು. ಇದರಿಂದಾಗಿ ಲಕ್ಷಾಂತರ ಜನರು ಉತ್ಸವಕ್ಕೆ ಸಾಕ್ಷಿಯಾದರು. ಫೋಟೊ ಜಲಕ್ ಇಲ್ಲಿದೆ.