ಫೋಟೊ ಗ್ಯಾಲರಿ

23-08-23 06:56 pm ಫೋಟೊ

ಭಾರತದ ತ್ರಿ’ವಿಕ್ರಮ’ ಸಾಧನೆ ; ಫಲ ನೀಡಿದ ಕೋಟಿ ಕಂಗಳ ಹಾರೈಕೆ, ಚಂದ್ರನ ನೆಲಕ್ಕಿಳಿದ ಗಗನ ನೌಕೆ, ಆಮೆ ನಡಿಗೆಯಲ್ಲೇ ಶಶಿಯ ಮುತ್ತಿಕ್ಕಿ ಹೊಸ ಮೈಲಿಗಲ್ಲು !

ಭಾರತದ ಇಸ್ರೋ ವಿಜ್ಞಾನಿಗಳು ತ್ರಿವಿಕ್ರಮ ಸಾಧನೆಯನ್ನು ಮಾಡಿದ್ದಾರೆ. ಇಸ್ರೋದಿಂದ ಒಂದು ತಿಂಗಳ ಹಿಂದೆ ಕಳಿಸಿಕೊಟ್ಟಿದ್ದ ಗಗನ ನೌಕೆಯು ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಲ್ಯಾಂಡ್ ಆಗಿದೆ. ಆಮೂಲಕ ಚಂದಿರನ ದಕ್ಷಿಣ ಧ್ರುವದಲ್ಲಿ ನೌಕೆ ಇಳಿಸಿದ ಮೊದಲ ದೇಶ ಎನ್ನುವ ಹೆಗ್ಗಳಿಕೆಯ ಹೊಸ ಇತಿಹಾಸವನ್ನು ಭಾರತ ದಾಖಲಿಸಿದೆ.